ಸ್ಫೂರ್ತಿ ನ್ಯೂಸ್ ಚಡಚಣ.
ತಾಲೂಕಿನ ಗುಂದವಾನ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಸಾಕಿದ ನವಜಾತ ಶಿಶು (ಗಂಡು ಮಗು) ವನ್ನು ಝಳಕಿ ಗ್ರಾಮದ 108ಆಂಬುಲೆನ್ಸ್ಸಿನ ಸಿಬ್ಬಂದಿ ದಾನೇಶ ಹಿರೆಮಠ ಹಾಗೂ ಚಾಲಕ ಭಾವುರಾಜ ಮಂಗಳವೇಡೆ ಅವರು ರಕ್ಷಣೆ ಮಾಡಿ ಅರೋಗ್ಯ ಇಲಾಖೆಗೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ
ಭಾನುವಾರ ಗುಂದವಾನ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮದ್ಯಾಹ್ನ ಎರಡು ಗಂಟೆಗೆ ಮಗು ಅಳುತ್ತಿರುವ ಸುದ್ದಿ ತಿಳಿದು 108 ಯಾಂಬುಲೆನ್ಸ ಸಿಬ್ಬಂದಿ ಸರಿಯಾದ ಸಮಯಕ್ಕೆ ತಲುಪಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ತಂದು ಝಳಕಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಗುವಿನ ರಕ್ಷಣಾ ಕಾರ್ಯಕ್ಕೆ ಇಲ್ಲಿನ ನಾಗರಿಕರು, ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಭಿನಂದಿಸಿದೆ.
Comments
Post a Comment