Skip to main content

ಪ್ರತಿ ಟನ್ ಕಬ್ಬಿನ ಬೆಲೆ 3500 ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆ



ಸ್ಫೂರ್ತಿ ನ್ಯೂಸ್ ಕೋಲಾರ : 

ಕಾರ್ಖಾನೆಗಳ ಮಾಲೀಕರು ಪ್ರತಿ ಟನ್ ಕಬ್ಬಗೆ  3500 ರೂಪಾಯಿ ನೀಡುವಂತೆ ಆಗ್ರಹಿಸಿ ಬಾಗಲಕೋಟ ಹಾಗೂ ವಿಜಯಪುರ ಅವಳಿ ಜಿಲ್ಲೆಯ ರೈತರು ಪಟ್ಟಣದ ಯುಕೆಪಿ ಬಳಿ ರಾಷ್ಟ್ರೀಯ ಹೆದ್ದಾರಿ 218ನ್ನು ಕ್ಷಣ ಕಾಲ ಕಬ್ಬಿನ ಟ್ರ್ಯಾಕ್ಟರ್ ಸೇರಿದಂತೆ ಅನೇಕ ವಾಹನಗಳನ್ನು ತಡೆದು ಬಂದ ಮಾಡಿ ಪ್ರತಿಭಟಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ನಂದಬಸಪ್ಪ ಚೌದ್ರಿ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವಳಿ ಜಿಲ್ಲೆಯ ರೈತರು ಭಾಗವಹಿಸಿದ್ದರು. ಸರ್ಕಾರ ಹಾಗೂ ಕಾರ್ಖಾನೆಗಳ ಮಾಲೀಕರ ವಿರುದ್ಧ ಘೋಷಣೆಯನ್ನು ಕೂಗಿದರು.

ಈ ಸಂದರ್ಭದಲ್ಲಿ ಈರುಳ್ಳಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ನಂದಬಸಪ್ಪ ಚೌದ್ರಿ ಮಾತನಾಡಿ, ಪ್ರತಿ ಟನ್  ಕಬ್ಬಿಗೆ 3500 ರೂಪಾಯಿ ದರ ನೀಡುವಂತೆ ಆಗ್ರಹಿಸಿ ಇಂದು ನಾವು ರೈತರು ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳನ್ನು ತಡೆದು ಹಾಗೂ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡುವುದರ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. 

ಅವಳಿ ಜಿಲ್ಲೆಯಲ್ಲಿ ಬರುವ ಕಬ್ಬಿಣ ಕಾರ್ಖಾನೆಗಳ ಮಾಲೀಕರು ನವಂಬರ್ 27ರಂದು ಕೊಲ್ಹಾರ ಪ್ರವಾಸಿ ಮಂದಿರದಲ್ಲಿ ನಡೆಯುವ ರೈತರ ಸಭೆಗೆ ಆಗಮಿಸಿ ಕಬ್ಬಿಗೆ ಪ್ರತಿ ಟನ್ ಗೆ ತಾವು ತಮ್ಮ ಕಾರ್ಖಾನೆ ವತಿಯಿಂದ ನೀಡುವ  ಕಬ್ಬಿನ ದರ ಪ್ರಕಟಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೊಲ್ಹಾರ ತಾಲೂಕಾಧ್ಯಕ್ಷ ಸೋಮು ಬಿರಾದಾರ ಹಾಗೂ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ವಿವಿಧ ತಾಲೂಕಿನ ರೈತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Comments

Popular posts from this blog

ರಮೇಶ ನಾಯಕ ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

ಸ್ಫೂರ್ತಿ ನ್ಯೂಸ್ಚ ಚಡಚಣ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ವಿಶ್ವ ಕನ್ನಡ ಬಳಗಬಾವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಧೂಳಖೇಡ  ಗ್ರಾಮದ ಭೀಮಾಶಂಕರಲಿಂಗ ಪ್ರೌಢಶಾಲೆ ಮುಖ್ಯ ಶಿಕ್ಷಕ  ರಮೇಶ  ನಾಯಕ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ ವಿಶ್ವ ಕನ್ನಡ ಬಳಗದ ಅಧ್ಯಕ್ಷ ಸದಾಶಿವ ಚೌಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವಂಬರ್ 1 ರಂದು ಹುಬ್ಬಳ್ಳಿಯ ಜಯಚಾಮರಾಜ ನಗರದ ಮಹಿಳಾ ಕಾಲೇಜು ಎದುರಿಗೆ ಅಕ್ಕನ ಬಳಗದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ರಮೇಶ ನಾಯಕ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಜಿ ಎಸ್ ಕಾಂಬಳೆ ವಿಜಯಪುರ ಹಾಗೂ ಚಡಚಣ ತಾಲೂಕ ಸಮಿತಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.