ಒಳ ಚರಂಡಿ ಕಾಮಗಾರಿಗೆ ಶಾಸಕ
ದೇವಾನಂದ ಚವ್ಹಾಣ ಅವರಿಂದ ಚಾಲನೆ
ಸ್ಫೂರ್ತಿ ನ್ಯೂಸ್ ಚಡಚಣ.
ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ ವಿಜಯಪುರ ನಗರದ ವಾರ್ಡ್ ನಂಬರ್.12 ರ ಕಾಳಿಕಾ ನಗರದಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಮಂಜೂರಾದ ರೂ.35.00 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಜನಪ್ರಿಯ ಶಾಸಕ.ದೇವಾನಂದ ಫೂಲಸಿಂಗ ಚವ್ಹಾಣ ರವರು ಈ ದಿನ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಳಿಕಾ ನಗರ, ಕಾರ್ಗಿಲ್ ನಗರ, ಲಕ್ಷ್ಮಿ ನಗರ ಗಳ ಮುಖಂಡರು, ಹಿರಿಯರು, ಯುವ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Comments
Post a Comment