ಸ್ಫೂರ್ತಿ ನ್ಯೂಸ್ ಚಡಚಣ.
ಕೇಂದ್ರ ಸರ್ಕಾರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರರ ನೇಮಕಾತಿಯಲ್ಲಿ ಕನ್ನಡಿಗರ ಆದ ಅನ್ಯಾಯ ಖಂಡಿಸಿ ತಹಶೀಲ್ದಾರ್ ಹನಮಂತ ಶಿರಹಟ್ಟಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿ ಮಂಗಳವಾರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡ ಮಹಾದೇವ ಬನಸೋಡೆ ಮಾತನಾಡಿ, ಕೇಂದ್ರ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ 20,000ಕ್ಕೂ ಹೆಚ್ಚಿನ ’ಬಿ’ ಮತ್ತು ’ಸಿ’ ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಸದರಿ ನೇಮಕಾತಿಯ ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲಾ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತನಕ ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನಡೆಯಲಿವೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಸಿಯುವಂಥಾ ತಾರತಮ್ಯದ ನಡೆಯಾಗಿದೆ. ನೇಮಕಾತಿಯ ಎಲ್ಲಾ ಹಂತದ ಪರೀಕ್ಷೆಗಳೂ ಹಿಂದೀ/ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರ ನಡೆಸುವುದು ಕನ್ನಡಕ್ಕೆ ಮಾಡಿದ ಅನ್ಯಾಯ. ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತraದ ಶಕೀಲ ಖಾಟಿಕ, ಶೂಕುರ ಕೊರ್ತಿ, ಹುಮಾ ಯನ ಪಟೇಲ, ಅಖಿಲ ಅರ್ಜುನಗಿ, ಜಿಲಾನಿ ವಾಲಿಕಾರ, ಜಟ್ಟೆಪ್ಪ ಬನಸೋಡೆ, ಸಂದೇಶ ಬನಸೋಡೆ, ಸುಭಾಸ ಬನಸೋಡೆ, ಈರಣ್ಣ ಪಾಟೀಲ ಇದ್ದರು.
Comments
Post a Comment