ಸ್ಫೂರ್ತಿ ನ್ಯೂಸ್ ಚಡಚಣ.
ದೇವರ ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಈರಣ್ಣ ಎಸ್ ನರೂಣಿ ಅವರಿಗೆ ಜಿಲ್ಲಾ ಯುವ ಪರಿಷತ್ತು ಮತ್ತು ಓದುಗರ ಚಾವಡಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಕೊಡಮಾಡುವ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಪ್ರಧಾನ ಮಾಡಲಾಯಿತು.
ವಿಜಯಪುರದ ಕಂದಗಲ್ ರಂಗಮಂದಿರದಲ್ಲಿ ಓದುಗರ ಚಾವಡಿ ಹಾಗೂ ಜಿಲ್ಲಾ ಯುವ ಪರಿಷತ್ತಿನ ಸಹಯೋಗದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ ಎಂ ಎಸ್ ಮಾಗಣಗೇರಿ, ಬೆಂಗಳೂರಿನ ಮಕ್ಕಳ ಹಕ್ಕುಗಳ ಜಾಗತಿಕ ರಾಯಭಾರಿ ಡಾ.ವನಿತಾ ತೊರವಿ ಬಿ. ಆರ್. ಬನಸೋಡೆ ಇದ್ದರು.
ನರೂಣಿ ಯವರ ಸಾಧನೆಗೆ ನಿವರಗಿ ಗ್ರಾಮಸ್ಥರು ಅಭಿನಂದನೆಗಳು ತಿಳಿಸಿದ್ದಾರೆ.
Comments
Post a Comment