ಸ್ಫೂರ್ತಿ ನ್ಯೂಸ್ ಚಡಚಣ
ಚಡಚಣ: ಸ್ವಚ್ಚ ಪರಿಸರ ನಿಮರ್ಾಣವನ್ನು ಪ್ರೋತ್ಸಹಿಸುವ ಸಲುವಾಗಿ ಸರಕಾರ 'ಹರಾ ಗೀಲಾ, ಸುಖಾ ನೀಲಾ' ಅಭಿಯಾನದಲ್ಲಿ ಸ್ವಚ್ಚ ಸವರ್ೇಕ್ಷಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಕುರಿತು ವಿಜಯಪುರ ಜಿಲ್ಲಾ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ ಅವರು ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಘನ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗಾಗಿ ಆದ್ಯತೆ ನೀಡಲಾಗಿದ್ದು, ತ್ಯಾಜ್ಯದಲ್ಲಿ ಒಣ ಕಸ ಹಾಗೂ ಹಸಿ ಕಸ ವಿಂಗಡಣೆ ಮಾಡಬೇಕು. ಸಂಗ್ರಹಣೆಯಾದ ಒಣ ಹಾಗೂ ಹಸಿ ಕಸದ ವಿಂಗಡಣೆ ಮಾಡುವದರಿಂದ ರೋಗ ಹರಡುವಿಕೆ ಪ್ರಮಾಣ ಇಳಿಮುಖ ವಾಗುತ್ತದೆ. ಸ್ವಚ್ಚ ಸುಂದರ ನಗರ ನಿರ್ಮಾಣ ಹಾಗೂ ಸ್ವಚ್ಚತೆ . ಜ ನ ಸಾಮಾನ್ಯರ ಆರೋಗ್ಯ ಹಾಗೂ ಜೀವನ ಮಟ್ಟ ಉತ್ತಮವಾಗಿಸಲು ಸಾಧ್ಯ ಎಂದರು.
ಕಾರ್ಯಪಾಲಕ ಅಭಿಯಂತರರು ಸುರಕೋಡ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಿ.ಕೆ ತಾವಸೆ ಮಾತನಾಡಿ, ಪಟ್ಟಣ ಸ್ವಚ್ಚತೆಯ ಜೊತೆಗೆ ತಮ್ಮ ಸುತ್ತಲಿನ ಪರಿಸರ ಸ್ವಚ್ಚತೆಯೂ ನಮ್ಮ ನಿಮ್ಮೆಲ್ಲರ ಹೊಣೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸಿಬ್ಬಂಧಿ ಹಾಗೂ ಸಾರ್ವಜನಿಕರು ಇದ್ದರು.
Comments
Post a Comment