ಸ್ಫೂರ್ತಿ ನ್ಯೂಸ್ ಚಡಚಣ.
ಕನ್ಯಾಕುಮಾರಿಯಿಂದ ಆರಂಭವಾಗಿ ಕಾಶ್ಮೀರದ ವರೆಗೆ ಜರುಗಲಿರುವ ಭಾರತ ಜೋಡೊ ಯಾತ್ರೆಯಲ್ಲಿ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕತ್ರರು ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೊಳಿಸೋಣ ಎಂದು ಮಾಜಿ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾರತ ಜೋಡೊ ಪಾದಯಾತ್ರೆಯ ಪೂರ್ವ ಭಾವಿ ಸಭೆಯಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಸಾಮರಸ್ಯಕ್ಕೆ ಇರುವ ಸವಾಲುಗಳನ್ನು ಪರಿಗಣಿಸಿ, ರಾಜ್ಯ ಶಾಂತಿಯ ತೋಟವಾಗಬೇಕು, ಇಂದು ಪ್ರತಿ ಕುಟುಂಬದಲ್ಲಿ ಹಣದುಬ್ಬರ ನಿರುದ್ಯೋಗ ಸಮಸ್ಯೆಗಳಿಂದ ಜನ ಬಳಲಿ ಹೋಗಿದ್ದಾರೆ. ಯುವಕರಿಗೆ ಉದ್ಯೋಗ ಸಿಗಬೇಕು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ಬರಬೇಕು, ರೈತರು ಮತ್ತು ಕೂಲಿಕಾರ್ಮಿಕರ ಬದುಕನ್ನು ಸುಲಭಗೊಳಿಸಬೇಕು ಎಂಬುದು ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ.ಹಕ್ಕೆ, ಕಾಂಗ್ರೆಸ್ ಹಿರಿಯ ಮುಖಂಡ ಡಿ.ಎಲ್.ಚವ್ಹಾಣ, ಕಿಸಾನ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, DCC ಸದಸ್ಯ ರವಿ ಬಿರಾದಾರ, ಕುತುಬುದ್ದಿನ ಪಟೇಲ,ಶಿವ ಪಾಂಡ್ರೆ, ಸೂರಜಗೌಡ ಪಾಟೀಲ, ಮಹಾಂತೇಶ ಗುಡ್ಡದ, ಬ್ಲಾಕ್ ಸಮಿತಿಯ ಉಪಾಧ್ಯಕ್ಷ ರಾಜು ಸಿಂಗೆ, ಕಲ್ಲಪ್ಪ ಕನಮಡಿ, ಪ್ರಧಾನ ಕಾರ್ಯದರ್ಶಿ ಸತೀಶ ಉಟಗಿ, ಶ್ರೀಶೈಲ ಕೋಳಿ, ಖಜಾಂಚಿಯಾದ ಶಬ್ಬೀರ ನದಾಫ್, ಹಾಗೂ ಗ್ರಾಮ ಪಂಚಾಯಿತಿಯ ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳು,ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ವೀರಾಸಾಬ ಅತ್ತಾರ, ಬಾಬು ಕೊಂಕಣಿ, ಬ್ಲಾಕ್ ಕಾಂಗ್ರೆಸ್ಸಿನ ಮಹಿಳಾ ಉಪಾಧ್ಯಕ್ಷ ಮಂಜುಳಾ ಪೂಜಾರಿ ಹಾಗೂ ಎಲ್ಲ ಮಹಿಳೆಯರು ಉಪಸ್ಥಿತರಿದ್ದರು.
Comments
Post a Comment