ಸ್ಫೂರ್ತಿ ನ್ಯೂಸ್ ಕೊಲ್ಹಾರ:
ಮಸೂತಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಸಂತೋಷ ಗಣಾಚಾರಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು,ಬ್ರಿಟಿಷರನ್ನು ಎದುರಿಸಿದ ಮೊಟ್ಟಮೊದಲ ಮಹಿಳಾ ಹೋರಾಟಗಾರ್ತಿ ಚನ್ನಮ್ಮ ಉತ್ತಮ ಆಡಳಿತಕ್ಕೆ ಹೆಸರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಕೆ ವಿ ಕುಲಕರ್ಣಿ, ಎಪಿಎಂಸಿ ನಿರ್ದೇಶಕರಾದ ಸಿ ಪಿ ಪಾಟೀಲ,ಹಿರಿಯರಾದ ಡಾ,ವಾಯ್ ಕೆ ಹೂಗಾರ, ಡಾ,ಬಿ ಎಸ್ ಸಂಧಿಮನಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು,ಅಪಾರ ಸಂಖ್ಯೆಯ ಸಮಾಜ ಭಾಂದವರು ಭಾಗವಹಿಸಿದ್ದರು.
Comments
Post a Comment