ವಿವಿಧ ರಸ್ತೆ ಕಾಮಗಾರಿಗೆ ಚಾಲನೆ:ಕೆರೆಗೆ ಬಾಗೀನು ಅರ್ಪಣೆ
ಸ್ಫೂರ್ತಿ ನ್ಯೂಸ್ ಚಡಚಣ.
ರಾಜ್ಯದ ಗಡಿ ಅಂಚಿನಲ್ಲಿರುವ ಚಡಚಣ ಪಟ್ಟಣವನ್ನು ಸಿ ಸಿ ರಸ್ತೆ ಹಾಗೂ ಒಳಚರಂಡಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿ ಮಾಡುತ್ತಿರುವುದಾಗಿ ಎಂದು ಎಂದು ಶಾಸಕ ದೇವಾನಂದ ಚವ್ಹಾಣ ಹೇಳಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಭಾನುವಾರ ಸುಮಾರು 2 ಕೋಟಿ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಕೈಗೊಳ್ಳಲಾದ ಕಾಂಕ್ರೆಟ್ ರಸ್ತೆ ನಿರ್ಮಾಣ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಾವಿನಾಳದಲ್ಲಿ ಸುಮಾರು ಒಂದು ಕೋಟಿ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದೇವಾಲಯಗಳ ಜಿರರ್ಣೋದ್ಧಾರ ಸೇರಿದಂತೆ ತಾಲ್ಲೂಕಿನ 38 ದೇವಾಲಯಗಳ ಜಿರ್ಣೋದ್ಧಾರಕ್ಕೆ ಚಾಲನೆ ನೀಡಿದ್ದು,ಸ್ಥಳಿಯ ವಿರಕ್ತ ಮಠಕ್ಕೆ 20 ಲಕ್ಷ ರೂಪಾಯಿ ಅನುದಾನ ಒದಗಿಸಲಾಗಿದೆ.ಚಡಚಣದಿಂದ ಉಮರಜ ಗ್ರಾಮದ ವರೆಗಿನ ರಸ್ತೆ ನಿರ್ಮಾಣಕ್ಕೆ 8 ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ, ನಾಗಠಾಣ ಮತಕ್ಷೇತ್ರದ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ 8 ಕೋಟಿ ಹಾಗೂ ಸಿ ಸಿ ರಸ್ತೆ ನಿರ್ನಾಣ,ಒಳ ಚರಂಡಿ ನಿರ್ಮಾಣಕ್ಕೆ 8 ಕೋಟಿ ಹಣ ಮಂಜೂರಾಗಿದೆ.ಕೆ.ಬಿ.ಜೆ.ಎನ್ ಎಲ್ ನಿಂದ ಕುಡಿಯುವ ನೀರು ಪುರೈಕೆ ಯೋಜನೆಗೆ 2 ಕೋಟಿ ಹಣ ಬಿಡುಗಡೆಯಾಗಿದ್ದು,ಮತಕ್ಷೇತ್ರದಲ್ಲಿ ಒಟ್ಟು 21 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ಈಗ ಅರಂಭಗೊಂಡಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ,ಮುಖಂಡರಾದ ರಾಜುಸಾಹುಕಾರ ಡೋಣಗಾಂವ,ಚಂದ್ರಶೇಖರ ನಿರಾಳೆ,ಮುರಗೇಶ ಸಿಂಪಿ,ಮುರ್ತುಜಿ ನದಾಫ,ಯೂನ್ನೂಸ ಅಲಿ ಮಕಾನದಾರ,ಭಿಮಾಶಂಕರ ವಾಳಿಖಿಂಡಿ, ಲಾಲಸಾಬ್ ಅತ್ತಾರ,ಅರ್ಜುನ ಕ್ಷತ್ರಿ,ಸುಕುರ್ ಕೊರ್ತಿ, ಮಹಾದೇವ ಬನಸೋಡೆ,ದೀಪಕ ಕದಂ,ಹುಮಾಯೂನ್ ಪಟೇಲ್, ರಾಮ ಮಾಲಾಪೂರ,ರಾಮ ಬಡಿಗೇರ,ಸೋಮು ಬಡಿಗೇರ, ಗುರುಬಾಳ ಗಿಡವೀರ, ದಾವಲಮಾ ಸೌದಾಗರ,ಮೈಬೂಬ್ ಸಾಬ ಸೌದಾಗರ,ಪ್ವೀಣ ಪಾಟೀಲ,ಪ್ರವೀಣ ಕಲ್ಯಾಣಶೆಟ್ಟಿ ಇದ್ದರು.
ನಂತರ ಪಂಢರಪೂರ ರಸ್ತೆ ಪಕ್ಕದಲ್ಲಿರುವ ಲಕ್ಷ್ಮೀ ಕೆರೆಗೆ ಬಾಗಿನು ಅರ್ಪಿಸಿ ಪೂಜೆ ಸಲ್ಲಿಸಿದರು.
Comments
Post a Comment