ಸ್ಫೂರ್ತಿ ನ್ಯೂಸ್ಕೊ ಕೊಲ್ಹಾರ -
ಕರ್ನಾಟಕ ಜನತಾ ಸೇನಾದಳ ತುಮಕೂರು ಜಿಲ್ಲಾ ಘಟಕ ಕೊಡಮಾಡುವ ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿಯು ಪಟ್ಟಣದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ, ಪತ್ರಕರ್ತ, ಬರಹಗಾರ, ಯುವ ಸಾಹಿತಿ ಮಲ್ಲಿಕಾರ್ಜುನ ಕುಬಕಡ್ಡಿಯವರಿಗೆ ಲಭಿಸಿದೆ.
ಅಕ್ಟೋಬರ್ 30ರಂದು ಬೆಳಿಗ್ಗೆ 10: 30ಕ್ಕೆ ತುಮಕೂರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಸಭಾ ಭವನದಲ್ಲಿ ಕರ್ನಾಟಕ ಜನತಾ ಸೇನಾ ದಳ ವತಿಯಿಂದ ನಡೆಯಲಿರುವ ಸ್ವಾಮಿ ವಿವೇಕಾನಂದ ಸರ್ವ ಧರ್ಮ ಸಮ್ಮಳನದ ಚಿಕ್ಯಾಗೋ ಭಾಷಣದ 129 ನೇ ವರ್ಷಾಚರಣೆಯ ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದ ಭಾವೈಕ್ಯ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೊಡಮಾಡಲಾಗುವದು ಎಂದು ಕರ್ನಾಟಕ ಜನತಾ ಸೇನಾ ದಳದ ರಾಜ್ಯಾಧ್ಯಕ್ಷ ಹೆಚ್ ಸದಾಶಿವ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಕೆ ಬಿ ಚಂದ್ರಚೂಡ ಪ್ರಕಟಣೆಗೆ ತಿಳಿಸಿದ್ದಾರೆ.
Comments
Post a Comment