ಸ್ಫೂರ್ತಿ ನ್ಯೂಸ್ ಕೋಲಾರ:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಾದ ಸ್ವಚ್ಛತಾ ಕೀ ದೋ ರಂಗ ಕಾರ್ಯಕ್ರಮ
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೀರೇಶ ಹಟ್ಟಿಯವರ ನೇತೃತ್ವದಲ್ಲಿ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಗಳಲ್ಲಿ ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ನಾವು ಕೊಲ್ಹಾರ ಪಟ್ಟಣವನ್ನು ಹಸಿ ಕಸ(ಹರಾ ಗೀಲಾ ) ಹಾಗೂ ಒಣ ಕಸ (ಸುಖಾ ನೀಲಾ ) ಬೆರ್ಪಡಿಸಿ ಪಟ್ಟಣ ಪಂಚಾಯ್ತಿ ಗೆ ಸಹಕರಿಸಿದಾಗ ಮಾತ್ರ ಸ್ವಚ್ಚತೆ ಕಾಪಾಡಲು ಸಾಧ್ಯ ಎಂದ ಅವರು,
ಇದರ ಕುರಿತು ಪ್ರತಿಯೊಬ್ಬರಿಗೂ ಕೂಡಾ ಅರಿವು ಮೂಡಿಸಬೇಕಾಗಿದೆ. ಇಂದಿನ ಮಕ್ಕಳೆ ನಾಳಿನ ನಾಡಿನ ನಾಗರೀಕರು ಹಾಗಾಗಿ ಕಲಿಯುವ ಹಂತದಲ್ಲಿ ನಿಮಗೆ ಸ್ವಚ್ಛತೆಯ ಬಗ್ಗೆ ತಿಳಿಸಿದರೆ ಮುಂದೆ ತಾವು ತಮ್ಮ ಮನೆಯಲ್ಲಿ ಕುಟುಂಬದವರಿಗೆ ಇದರ ಬಗ್ಗೆ ಅರಿವು ಮೂಡಿಸುವ ಮೂಲಕ ಎಲ್ಲರೂ ಜಾಗೃತರಾಗಿ ಮನೆ ಹಾಗೂ ಪರಿಸರ, ಪಟ್ಟಣವನ್ನು ಸ್ವಚ್ಚವಾಗಿಡಲು ಸಾಧ್ಯ ವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ ಮಾತನಾಡಿ, ಹಸಿ ಕಸ ಹಾಗೂ ವನ ಕಸದ ಬಗ್ಗೆ ಸಂಪೂರ್ಣ ಅರಿತುಕೊಂಡು ತಾವು ತಮ್ಮ ಪಾಲಕ ರಿಗೆ ತಿಳಿಸಿ ಕೊಲ್ಹಾರ ಪಟ್ಟಣವನ್ನು ಸ್ವಚ್ಚ ಪಟ್ಟಣವನ್ನಾಗಿ ಮಾಡಲು ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ಮಂಜು ಚಿತ್ತರಗಿ, ಶಿಕ್ಷಕರಾದ ಎಸ್ ಎಸ್ ಉತ್ನಾಳ, ಪ್ರಕಾಶ ನಾಯಕ, ಸಿ ಎಚ್ ಗೌಡರ, ಆರ್ ಎಲ್ ನಂದಿ, ಪರು ಗಣಿ, ವಿ ಎಸ್ ಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Comments
Post a Comment