ಸ್ಫೂರ್ತಿ ನ್ಯೂಸ್ ಚಡಚಣ
ಭ್ಹ್ರಮ ಕುಮಾರಿ ಈಶ್ವರೀಯ ಮಹಾವಿದ್ಯಾಲಯ ನೀಡುವ ಆಧ್ಯಾತ್ಮ ಜ್ಞಾನವನ್ನು ಜೀವನದಲ್ಲಿ ಅಳವಡಸಿಕೊಂಡರೆ ಜೀವನ ಸರಳ ಮತ್ತು ಅರ್ಥಪೂರ್ಣವಾಗುವದು ಎಂದು ಚಡಚಣ ತಹಶೀಲದಾರ ಹಣಮಂತ ಶಿರಹಟ್ಟಿ ಹೇಳಿದರು.
ಚಡಚಣ ಪಟ್ಟಣದ ಈಶ್ವರಿ ಕೇಂದ್ರದ ಶ್ರೀದೇವಿ ಅಕ್ಕನವರು ನವರಾತ್ರಿಯಿಂದ ನಡೆಸಿದ 21 ಮೌನ ಅನುಷ್ಟಾನದ ಮುಕ್ತಾಯ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಸಂಭಂದಗಳನ್ನು ಶಾಂತ ಮನಸ್ಸಿನೊಂದಿಗೆ ನೀಭಾಯಿಸುವದನ್ನು ಓ ಶಾಂತಿ ಕೇಂದ್ರಗಳು ಬಹಳ ಸರಳವಾಗಿ ಕಲಿಸುತ್ತವೆ. ಆದ್ಯಾತ್ಮ ಬರಿ ವಯಸ್ಸಾದವರಿಗೆ ಎನ್ನವು ತಪ್ಪು ಕಲ್ಪನೆ ಜನರಲ್ಲಿದ್ದು ಎಲ್ಲರೂ ಆದ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದರು.
ಪ್ರಾಚರ್ಯ ಎಂ.ವಿ.ಕಟಗೇರಿ ಇವರನ್ನು ಓಶಾಂತಿ ಕೇಂದ್ರದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿದ್ಯ ಇಂಡಿ ಓ ಶಾಂತಿ ಕೇಂದ್ರದ ಯಮುನಾಜಿ ಅಕ್ಕನವರು ಮತ್ತು ಚಡಚಣ ಕೇಂದ್ರದ ಶ್ರೀದೇವಿ ಅಕ್ಕನವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ಕೇಂದ್ರದ ಸ್ವಯಂಸೇವಕರಾದ ಮಲ್ಲಿನಾಥ ವನಕುದುರೆ, ಎಸ್.ಎನ್ ಸಾಲೋಟಗಿ, ಮಹೇಶ ಕೇಶಟ್ಟಿ, ಎಂ.ಆರ್ ಹಿಟ್ನಳ್ಳಿ, ರಾಜು ಸರಸಂಬಿ, ಅವಟಿ ಸರ್, ಸೇರಿದಂತೆ ನೂರಾರು ಉಪಸ್ಥಿತರಿದ್ದರು.
Comments
Post a Comment