ಸ್ಫೂರ್ತಿ ನ್ಯೂಸ್ ಚಡಚಣ.
ನಾಗಠಾಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿ ಗೆ ಬದ್ಧನಾಗಿರುವುದಾಗಿ ಶಾಸಕ ದೇವಾನಂದ ಚವ್ಹಾಣ ಹೇಳಿದರು.
ವ್ಯಾಪ್ತಿಯ ವಿಜಯಪುರ ನಗರದ ವಾರ್ಡ್ ನಂ.15 ರಲ್ಲಿ ಬರುವ ಶಿಖ್ ಕಾಲೋನಿಯ ಜರ್ಮನ್ ಪ್ಯಾಕ್ಟರಿ ಹತ್ತಿರ ಲೋಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಲೆಕ್ಕ ಶೀರ್ಷಿಕೆ (ಎಸ್.ಡಿ.ಪಿ - ಎಸ್.ಸಿ.ಪಿ.) ಯೋಜನೆಯಡಿಯಲ್ಲಿ ರೂ.10.00 ಲಕ್ಷಗಳ ಅನುದಾನದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿಖ್ ಕಾಲೋನಿ, ಕೃಷ್ಣ ನಗರ, ಆದಿಲ್ ಶಾಹಿ ನಗರ, ಶಾಹಿನಷಾ ನಗರ, ಯೋಗಾಪುರ ಕಾಲೋನಿಯ ಮುಖಂಡರು, ಹಿರಿಯರು,ಯುವ ಮುಖಂಡರು, ಕಾರ್ಯಕರ್ತರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Comments
Post a Comment