ಸ್ಫೂರ್ತಿ ನ್ಯೂಸ್ ಚಡಚಣ.
ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಹಾಗೂ ಲೇಖಕ ಎಮ್ ಕೆ ಶೇಖ ಅವರ "ನೂಲು" ಎಂಬ ಕಥಾ ಸಂಕಲನದ "ಮನುಷತ್ವದೆಡೆಗೆ ಆವ್ಹಾನ " ಎಂಬ ಕಥೆಯು ವಿಜಾಪುರದ ಅಕ್ಕಮಹಾದೇವಿ ಮಹಿಳಾ ವಿಶ್ವಾವಿದ್ಯಾಲಯದ ಬಿ. ಕಾಮ್ ಮೂರನೇ ಸೆಮಿಸ್ಟರ್ ಪಠ್ಯಕ್ರಮಕ್ಕೆ ಆಯ್ಕೆ ಮಾಡಿ ಆದೇಶ ಹೋರಾಡಿಸಿರುವುದು ಚಡಚಣ ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಎಸ್ ಎಸ್ ಹಾವಿನಾಳ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಶಿಕ್ಷಕನ ಸಾಧನೆಗೆ ಸಾಹಿತಿ ಬಸವರಾಜ ಯಂಕಂಚಿ, ತಾಲೂಕು ಗೌರವಾಧ್ಯಕ್ಷ ಸಿದ್ದಣಸಾಹುಕಾರ ಬಿರಾದಾರ, ರುಪ್ಸ್ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಮೇಶ ಜಿತ್ತಿ, ಕಾರ್ಯದರ್ಶಿ ಕೆ ಪಿ ಬೋಳೆಗಾಂವ, ತಾಲೂಕು ಅಧ್ಯಕ್ಷ ರವಿ ಬಿರಾದಾರ, ಉಪಾಧ್ಯಕ್ಷ ಅಬ್ದುಲಗನಿ ಸೌಧಿ, ಕಾರ್ಯದರ್ಶಿ ಎ ಬಿ ಪಾಟೀಲ, ನಿರ್ದೇಶಕರಾದ ಪೊದ್ದಾರ, ಮೋಹನ ಚೋಳಖೆ,ಜೋಶೆಪ,ರೇವಣಸಿದ್ಧ ಪೂಜಾರಿ,ರಾಜು ವಾಲಿ,ಪ್ರವೀಣ ನಾಯ್ಕೋಡಿ, ಪಿಂಟು ಹಾವಿನಾಳ,ಸಿದ್ದು ತೇಲಿ, ಲಚ್ಯಾಣ ಸರ್,ಅಮಸಿದ್ದ ಭೈರಗೊಂಡ, ಎ ಕೆ ಚಡಚಣ,ಸಂಗು ತುಪ್ಪದ, ನಾರಾಯಣ ಸರ್ಸೇರಿದಂತೆ ತಾಲೂಕು ಖಾಸಗಿ ಶಿಕ್ಷಕ ಸಮೂಹ ಹರ್ಷ ವ್ಯಕ್ತಪಡಿದೆ.
.
Comments
Post a Comment