ಸ್ಫೂರ್ತಿ ನ್ಯೂಸ್ಚ ಚಡಚಣ
ಸಮೀಫದ ಹಾವಿನಾಳ ಗ್ರಾಮದ ಶ್ರೀ. ದತ್ತ ಇಂಡಿಯಾ ಕಂಪನಿಯ ಇಂಡಿಯನ್ ಶುಗರ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಬಾಯ್ಲರ್ ಪ್ರದೀಪನ ಕಾರ್ಯಕ್ರಮ ಸೋಮುವಾರ ಜರುಗಿತು
ಬಾಯ್ಲರ್ ಪೂಜಾ ಕಾಯಕ್ರಮ ಹಾಗೂ ಪ್ರದೀಪನ ಕಾರ್ಯಕ್ರಮಕ್ಕೆ ಕಂಪನಿಯ ನಿರ್ದೇಶಕ ಚೇತನ್ ಧಾರು , ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ದತ್ತ ಸುಗರ್ಸ್ ಕಂಪನಿಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಮಾತನಾಡಿ,ಪ್ರಸಕ್ತ ಸಾಲಿನ ಕಬ್ಬು ನುರಿಸುವ ಕಾರ್ಯ ಅ.31 ರಂದು ಆರಂಭಗೊಳ್ಳಲಿದೆ.
ಕಾರ್ಖೆಯನು 7.50 ಲಕ್ಷ ಮೆ.ಟನ್ ಗುರಿ ಸಾಧಿಸಲು ರೈತರೊಂದಿಗೆ ಕಬ್ಬಿನ ನೋಂದಣಿ,
ಕಬ್ಬು ಕಡೆಯುವ ಕೃಮಿಕರು ಹಾಗೂ , ಕಬ್ಬು ಸರಭರಾಜು ಮಾಡುವ ವಾಹನಗಳ ಮಾಲಿಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿಯ ಕೆಲಸ ಪೂರ್ಣ ಪೂರ್ಣಗೊಂಡಿದ್ದು, ಕಬ್ಬು ನುರಿಸುವ ಕಾರ್ಯಕ್ಕೆ ಕ್ಷಣಗಣೆ ಆರಂಭವಾಗಿದ ಎಂದರು.
ಕಾರ್ಖಾನೆಯ ನಿರ್ದೇಶಕ ಚೇತನ್ ಧಾರು ಮಾತನಾಡಿ,ಕಬ್ಬು ಬೆಳೆಗಾರರು ,ಕಬ್ಬು ಕಟಾವುದಾರರು, ಸಾಗಾಣಿಕೆದಾರರು, ವ್ಯಾಪಾರಸ್ಥರು, ಹಾಗೂ ಹಿತೈಶಿಗಳು ಎಂದಿನಂತೆ ಸಕ್ಕೆರೆ ಕಾರ್ಖಾನೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಸಹಕರಿಸಬೇಕು ಎಂದ ಅವರು, ಕಾರ್ಖಾನೆಯ ಎಲ್ಲ ನೌಕರರಿಗೆ ದೀಪಾವಳಿ ಪ್ರಯುಕ್ತ ಒಂದು ತಿಂಗಳ ವೇತನ ಬೊನಸ್ ಮತ್ತು 10 ಕಿಲೋ ಸಕ್ಕರೆ ಉಚಿತವಾಗಿ ಕೊಡಲಾಗಿದೆ, ಹಂಗಾಮು ಮುಕ್ತಾಯವಾದ ನಂತರ ಒಂದು ತಿಂಗಳ ವೇತನವನ್ನು ಬಹುಮಾನ ರೂಪವಾಗಿ ಕೊಡುವದಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಅಡಳಿತ ಮಂಡಳಿಯ ಸುರಜ್ ಬಾಂದಲ್, ರವೀಂದ್ರ ಗಾಯಕವಾಡ, ಹೇಮಂತ ಮುದಲಿಯಾರ, ಸಿದ್ದಾರಾಮ ಢಾಗಣೆ, ಮತ್ತು ಆಡಳಿತಾಧಿಕಾರಿ ಕ್ರಾಂತಿಕುಮಾರ ಚವ್ಹಾಣ,ಚೀಫ್ ಇಂಜಿನಿಯರ್ ವಿನಾಯಕ ನಾಗಾವೆ ,ಚೀಫ್ ಕೆಮಿಸ್ಟ್ರೀ ಪ್ರೇಮ್ ಸಿಂಗ, ಕೇನ್ ಮ್ಯಾನೇಜರ್ ನವನಾಥ ಪಾಟೀಲ, ಕೃಷಿ ಅಧಿಕಾರಿಗಳಾದ ಅನಿರುದ್ಧ ಪಾಟೀಲ, ಅಮೂಲ ಪಾಟೀಲ, ಕೃಷ್ಣಾ ಢೇರೆ, ಬಾಳಾಸಾಹೇಬ ದೇವಕತೆ, ಪಿ ಆರ್ಮ ಒ ಪ್ರಮೋದ ಪಾಟೀಲ ತ್ತು ರೈತರು,ನೌಕರರು ಇದ್ದರು.
Comments
Post a Comment