ಸ್ಫೂರ್ತಿ ನ್ಯೂಸ್ ಚಡಚಣ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಶಾಸಕ ಯಶವಂತರಾಯಗೌಡ ವ ಪಾಟೀಲ ರವರ 55ನೇ ಜನ್ಮದಿನದ ನಿಮಿತ್ತವಾಗಿ ಬ್ರಹತ್ ರಕ್ತದಾನ ಶಿಬಿರವನ್ನು ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಜನಸೇವಕ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಬಿ ಎಲ್ ಡಿ ಇ ಆಸ್ಪತ್ರೆ ರಕ್ತಭಂಡಾರ ವಿಭಾಗದ ಸಿಬ್ಬಂದಿ ರಾಜಶೇಖರ ಚಿನವಾರ ಮಾತನಾಡಿ ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಿದಂತಾಗುತ್ತದೆˌ ಥೆಲಾಸೀಮಿಯಾ ಅಂತಹ ರೋಗಿಗಳು ನಿಮ್ಮನ್ನೆ ಅವಲಂಬಿಸಿರುತ್ತಾರೆ ಬಬಲಾದ ಗ್ರಾಮವು ವಿಜಯಪುರ ಜಿಲ್ಲೆಗೆ ರಕ್ತದಾನ ಮಾಡಲು ಹೆಸರುವಾಸಿಯಾಗಿದೆ ಮತ್ತು ಎಲ್ಲರಿಗೂ ಪ್ರೇರಣೆ ಆಗಿದೆ. ಈ ಗ್ರಾಮದ ರಕ್ತದಾನಿಗಳು ಜೀವದಾನಿಗಳು ಅಂತ ತಿಳಿಸಿದರು.
ಪ್ರೀತು ದಶವಂತ ಮಾತನಾಡಿ, ರಕ್ತದಾನವು ಜೀವ ಉಳಿಸುವ ಪ್ರಕ್ರಿಯೆ ಆಗಿರುವುದರಿಂದ ಇದನ್ನು ರಕ್ತದಾನ ಜೀವದಾನ ಅನ್ನುವರುˌ ಇದಕ್ಕೆ ಬದಲಿ ಸಂಯೋಜನೆ ಇಲ್ಲ ವಿಜ್ಞಾನ ತಂತ್ರಂಜ್ಞಾನ ಎಷ್ಟೇ ಮುಂದುವರಿದರು ಇದನ್ನು ಕೃತಕವಾಗಿ ತಯಾರಿಸಲು ಸಾದ್ಯವಾಗಿಲ್ಲ.ˌ ರಕ್ತದಾನ ಮಾಡುವ ಮೂಲಕ ಮಾತ್ರ ಇದು ಸಾದ್ಯ. ಸತತವಾಗಿ ಶಾಸಕರ ಜನ್ಮದಿನದ ನಿಮಿತ್ತವಾಗಿ ಈವರೆಗೂ ಬಬಲಾದ ಗ್ರಾಮದಲ್ಲಿ 9ನೇ ಬಾರಿ ರಕ್ತದಾನ ಮಾಡಲಾಗಿದೆ . ಮುಂದೆವು ಕೂಡ ನಡೆಸಲಾಗುವುದು ಅಂತ ತಿಳಿಸಿದರು.
ಹೊರ್ತಿ ಪಿಕೆಪಿಎಸ್ ಸಿಇಒ ಅಣ್ಣಾರಾಯ ಬಾ ಪೂಜಾರಿ ಮಾತನಾಡಿ, ಪ್ರೀತು ದಶವಂತ ಜನಸೇವಕ ಬಳಗ ಸದಾ ಯಾವಾಗಲು ಸಾಮಾಜಿಕ ಕಾರ್ಯಗಳನ್ನು ಯಾವುದೇ ಪಲಾಪೇಕ್ಷೆ ಇಲ್ಲದೆ ನಿರಂತರವಾಗಿ ಮಾಡುತ್ತಿರುವುದು ನಮ್ಮ ಜಿಲ್ಲೆಯ ಹಾಗೂ ನಮ್ಮ ತಾಲೂಕಿನ ಜನರಿಗೆ ಬಹಳಷ್ಟು ಅನಕೂಲವಾಗಿದೆ. ಇವರ ಎಲ್ಲಾ ಕೆಲಸ ಕಾರ್ಯಗಳಿಗೆ ನಮ್ಮ ಸಹಕಾರ ಬೆಂಬಲ ಪ್ರೋತ್ಸಾಹ ಸದಾ ಇರುತ್ತದೆ ಅಂತ ತಿಳಿಸಿದರು.
ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ 41ಜನ ರಕ್ತದಾನ ಮಾಡಿದರು.
ಶಿಬಿರವನ್ನು ಅಣ್ಣಾರಾಯ ಬಾ ಪೂಜಾರಿˌ ಉಧಾಟಿಸಿದರು.ಅಧ್ಶಕ್ಷತೆ ಸುನಂದ ಹ ಬಿರಾದಾರˌ ಪೋಟೋ ಪೂಜೆ ಬಾಪೂರಾಯಗೌಡ ಮ ಬಿರಾದಾರ ಕೊಳುರ್ಗಿ ಗ್ರಾ. ಪಂ ಅಧ್ಯಕ್ಷ ಧರೆಪ್ಪ ಮಕಣಾಪೂರ ಜಂಟಿಯಾಗಿ ನೆರವೇರಿಸದರು.
ಡಾ|| ನಿಖಿಲ ದೊಡ್ಡಮನಿ, ಗುರುಶಾಂತ ಪಾಸೋಡಿˌ, ಬಿರಾದಾರˌ ಎಸ್ ವಿ ವಠಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿˌಡಾ.ನಿಖಿಲ ದೊಡಮನಿ, ಪ್ರಾಥಮಿಕ ಆರೋಗ್ಶ ಕೇಂದ್ರ ಸಿಬ್ಬಂದಿˌ ಬಬಲಾದ ಉಪಕೇಂದ್ರ ಸಿಬ್ಬಂದಿˌ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಶಂಕ್ರೆಪ್ಪ ದಶವಂತ, ದೇವರಾಜ. ಯಲ್ಲಪ್ಪ, ನಾರಾಯಣˌ ಶಿವು ಪೂಜಾರಿˌ ತೋಹಿಪ್ˌ ರಾಜು ಮುಲ್ಲಾˌ ಸುದಾಕರ್ ನಾಟಿಕರ್ˌ ಹಣಮಂತ ಬಿರಾದಾರ ˌಮಲ್ಲಕಾರ್ಜುನ ದಶವಂತ . ಗೌತಮಿ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳುˌ ಅಭಿಮಾನಿಗಳು ಭಾಗವಹಿಸಿದ್ದರು.
ಪ್ರೀತು ದಶವಂತ ನಿರುಪಿಸಿ
ಬಸವರಾಜ ರಾಜನ್ನವರ್ ಸ್ವಾಗತಿಸಿˌ
ಕುಮಾರ ದಶವಂತ ವಂದಿಸಿದರು.
Comments
Post a Comment