ಸ್ಫೂರ್ತಿ ನ್ಯೂಸ್ ಚಡಚಣ.
ತಾಲೂಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹತ್ತಳ್ಳಿ ಮುಖ್ಯ ಶಿಕ್ಷಕ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಜಿ.ಎಸ್. ಕಾಂಬಳೆ ಅವರಿಗೆ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅವರು ಕೊಡಮಾಡುವ 2022 ನೇ ಸಾಲಿನ ಡಾ. ಬಿ.ಆರ್.ಅಂಬೇಡ್ಕರ್ ಫೆಲೋಷಿಪ್ ನ್ಯಾಷನಲ್ ಅವಾರ್ಡಗೆ ಆಯ್ಕೆಯಾಗಿದ್ದಾರೆ ಎಂದು ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ಅಧ್ಯಕ್ಷ ಎಸ್ ಪಿ ಸುಮನಸ್ಕೆರ ಆದೇಶದಲ್ಲಿ ತಿಳಿಸಿದ್ದಾರೆ.
ಈ ಪ್ರಶಸ್ತಿಯು ಡಿಸೆಂಬರ್ 11 ರಂದು ದೆಹಲಿಯಲ್ಲಿ ನಡೆಯಲಿರುವ 38ನೇ ದಲಿತ ಸಾಹಿತ್ಯ ಅಕಾಡೆಮಿಯ ನ್ಯಾಷನಲ್ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
Comments
Post a Comment