ಸ್ಫೂರ್ತಿ ನ್ಯೂಸ್ ಚಡಚಣ.
ನಮ್ಮಲ್ಲಿರುವ ನಾನು ಎಂಬ ಅಹಂ ನಮ್ಮನು ಬಿಟ್ಟು ಹೋಗುತ್ತೋ ಅವತ್ತು ನಾವು ಮೋಕ್ಷಕ್ಕೆ ಅರ್ಹರು ಎಂಬ ಕನಕದಾಸರ ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ಶ್ರೀಶೈಲ್ ಚನಗೊಂಡ ಹೇಳಿದರು.
ಪಟ್ಟಣದ ಬಿಇಒ ಹಾಗೂ ಬಿ ಆರ್ ಸಿ ಕಚೇರಿಯಲ್ಲಿ ದಾಸ ಶ್ರೇಷ್ಠ, ಶ್ರೇಷ್ಠ ಸಂತ ಶ್ರೀ ಕನಕದಾಸರ 535 ನೇ ಜಯಂತೋತ್ಸವದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಸಂಯೋಜಕ ಎಮ್ ಎಲ್ ಪಾಂಡ್ರೆ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ ಇರಬೇಕೆಂದರೆ ಕನಕದಾಸರ ಕುಲ ಕುಲ ಕುಲವೆಂದು ಏಕೆ ಬಡೆದಾಡುವಿರಿ ಕುಲದ ನೇಲೆ ಬಲ್ಲಿರಾ ಎಂಬ ತತ್ವವನ್ನು ಅರಿತರೆ ಇಡೀ ಜಗತ್ತೇ ಸುಂದರಮಯವಾಗುತ್ತದೆ ಎಂದು ಹೇಳಿದರು .
ಸಿ ಆರ್ ಪಿ ಗಳಾದ ಸದಾಶಿವ ಆಲಗೂರ, ಶಶಿಧರ ಹೊನ್ನಳ್ಳಿ, ಅವರು ಕನಕದಾಸರ ಜೀವನ ಚರಿತ್ರೆ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷತೆ ಪತ್ರಾಂಕಿತ ವ್ಯವಸ್ಥಾಪಕ ಅಶೋಕ ಉಮರಾಣಿ ವಹಿಸಿದ್ದರು.
ರಾಜೇಶ ವಾಲಿಕಾರ ಹಾಗೂ ಶರಣು ಜಿರಂಕಲಿ, ಪ್ರಭುಲಿಂಗ ಗುಮತೆ ಅವರು ಕನಕದಾಸರ ಫೋಟೊ ಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಸೂರಜ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶರಣು ಜಿರಂಕಲಿ, ಶಶಿಧರ ಹೊನ್ನಳ್ಳಿ , ಸತೀಶ ಬಗಲಿ ಹಾಗೂ ಸಿ ಆರ್ ಪಿ ಗಳು, ಅವಳಿ ಕಾರ್ಯಾಲಯದ ಎಲ್ಲ ಸಿಬ್ಬಂದಿಯವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕ್ಷೇತ್ರ ಸಂಪನ್ಮೂಲ ವ್ಯಕಕ್ತಿ ಸತೀಶ ಬಗಲಿ ನಿರೂಪಿಸಿದರು .
Comments
Post a Comment