Skip to main content

ವೈಜ್ಞಾನಿಕ ಮನೋಭಾವ ಹೆಚ್ಚಿಸುವಲ್ಲಿ ಕೆ ಜೆ ವ್ಹಿ ಎಸ್ ಪಾತ್ರ ಮಹತ್ವದ್ದು : ಚನಗೊಂಡ


 ಸ್ಫೂರ್ತಿ ನ್ಯೂಸ್ ಚಡಚಣ.

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಅನೌಪಚಾರಿಕವಾಗಿ ಹೆಚ್ಚಿಸುವಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪಾತ್ರ ಮಹತ್ವದ್ದು ಎಂದು ಶಿಕ್ಷಣ ಸಂಯೋಜಕರ ಶ್ರೀಶೈಲ ಚನಗೊಂಡ ಹೇಳಿದರು.

ಝಳಕಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರೌಢ ಶಾಲೆಯಲ್ಲಿ ನಡೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿಜಯಪುರ ಅವರ ಆಶ್ರಯದಲ್ಲಿ   ನಡೆದ ಜಿಲ್ಲಾ ಮಟ್ಟದ  ಸ್ವಾತಂತ್ರ್ಯ ಅಮೃತ ಮಹೋತ್ಸವ ರಸಪ್ರಶ್ನೆ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

 ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷರಾದ ಜಿ ಎಸ್ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಕೆ ಜೆ ವ್ಹಿ ಎಸ್ ನಡೆದು ಬಂದ ದಾರಿ ಕುರಿತು ಹೇಳಿದರು.

ಸರಕಾರಿ ಪ್ರೌಢ ಶಾಲೆ ಝಳಕಿ ಮುಖ್ಯ ಶಿಕ್ಷಕ ಶಿವಾಜಿ ನಾಗಣಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಹೆಚ್ಚು ಹೆಚ್ಚು ಸಂಘಟನೆ ಮಾಡಿ ವಿಜ್ಞಾನವನ್ನು ಸರಳವಾಗಿ ಕಲಿಯಲು ಅನುಕೂಲವಾಗಲಿದೆ ಎಂದರು.

ಜಿಲ್ಲಾ ಸಮನ್ವಯಾಧಿಕಾರಿ ಶ್ರೀದೇವಿ ಪಾಟೀಲ ಜಿಲ್ಲಾ ಮಟ್ಟದ ಆನ್ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡ ಬಗ್ಗೆ ವಿವರಿಸಿದರು.

ಜಿಲ್ಲಾ ಕಾರ್ಯದರ್ಶಿ ರಮೇಶ ನಾಯಕ ಅವರುಪ್ರಥಮ. ಶೌರ್ಯ ರಾಜೇಶ್ ಕಟ್ಟಿ.ಸೇಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿಜಯಪುರ.ದ್ವಿತೀಯ. ನವೀನ ಅವರಾದ.ಬ್ರಿಲಿಯಂಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ತಾಳಿಕೋಟಿ.ತೃತೀಯ. ಸಮರ್ಥ ರವಿಚಂದ್ರ ಬನಸೋಡೆ.ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆ ಚಡಚಣ.ಪ್ರಶಸ್ತಿ ಪ್ರಧಾನ ಮಾಡಿದರು .

ಝಳಕಿ ಕ್ಲಸ್ಟರಿನ ಸಿ ಆರ್ ಪಿ ಗಳಾದ ಬಾಲಕೃಷ್ಣ ಬಾಲಗಾಂವ ಸ್ಥಳೀಯ ಪ್ರೌಢಶಾಲಾ ಶಿಕ್ಷಕರಾದ ಪ್ರವೀಣ ನಾಯ್ಕೊಡೆ ಉಪಸ್ಥಿತರಿದ್ದರು.

Comments

Popular posts from this blog

ರಮೇಶ ನಾಯಕ ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.

ಸ್ಫೂರ್ತಿ ನ್ಯೂಸ್ಚ ಚಡಚಣ. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ವಿಶ್ವ ಕನ್ನಡ ಬಳಗಬಾವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಧೂಳಖೇಡ  ಗ್ರಾಮದ ಭೀಮಾಶಂಕರಲಿಂಗ ಪ್ರೌಢಶಾಲೆ ಮುಖ್ಯ ಶಿಕ್ಷಕ  ರಮೇಶ  ನಾಯಕ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ ವಿಶ್ವ ಕನ್ನಡ ಬಳಗದ ಅಧ್ಯಕ್ಷ ಸದಾಶಿವ ಚೌಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವಂಬರ್ 1 ರಂದು ಹುಬ್ಬಳ್ಳಿಯ ಜಯಚಾಮರಾಜ ನಗರದ ಮಹಿಳಾ ಕಾಲೇಜು ಎದುರಿಗೆ ಅಕ್ಕನ ಬಳಗದಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ರಮೇಶ ನಾಯಕ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಜಿ ಎಸ್ ಕಾಂಬಳೆ ವಿಜಯಪುರ ಹಾಗೂ ಚಡಚಣ ತಾಲೂಕ ಸಮಿತಿಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.