ಹಿರಿಯರಿಗೆ ಬಾಲ್ಯದ ದಿನಗಳನ್ನು ನೆನೆಯುವ ದಿನ.
ಸ್ಫೂರ್ತಿ ನ್ಯೂಸ್ ಚಡಚಣ.
ಜವಹಾರಲಾಲ್ ನೆಹರೂ ಅವರ ಜನ್ಮ ದಿನದಂದು ಆಚರಿಸುವ ಮಕ್ಕಳ ದಿನಾಚರಣೆ ಹಿರಿಯರಿಗೆ ಬಾಲ್ಯದ ದಿನಗಳನ್ನು ನೆನೆಯುವ ದಿನ, ಮಕ್ಕಳಿಗೆ ನೆಹರೂ ಅವರನ್ನು ನೆನೆಯುತ್ತಾ ಆನಂದಿಸುವ ದಿನ, ಶಿಕ್ಷರಿಗೆ ಮಕ್ಕಕನ್ನು ಆನಂದವನ್ನು ಸವಿದು ಮೆಲಕು ಹಾಕುವ ದಿನವಾಗಿದೆ ಎಂದು ಫಾರ್ಮಸಿ ಕಾಲೇಜಿನ ಉಪನ್ಯಾಸಕಿ ನೀಲಾಂಬರಿ ಖಾನಾಪುರ ಹೇಳಿದರು.
ಪಟ್ಟಣದ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕ ಸುರೇಶ ಜಂತಿ ಮಾತನಾಡಿ, ಪ್ರತಿ ಮಗುವು ಮುಗ್ಧತೆ, ಕ್ಷಮಾಗುಣ, ಸ್ನೇಹ, ಕಾಳಜಿ, ಕ್ರಿಯಾಶೀಲತೆ ಮತ್ತು ಅಪರಿಮಿತ ಪ್ರೀತಿಯ ಪ್ರತೀಕವಾಗಿರುತ್ತಾರೆ. ಒಂದು ಮಗು ಕನಸು ಕಂಡರೆ ಅದರಿಂದಾಗಿ ಇಡೀ ರಾಜ್ಯವು ಪ್ರಗತಿ ಕಾಣುತ್ತದೆ ಹಾಗಾಗಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಬೇಕು, ಭವಿಷ್ಯದ ಬಗ್ಗೆ ಕನಸುನ್ನು ಕಾಣುವಂತೆ ಪೋತ್ಸಹಿಸಬೇಕು ಎಂದರು.
ಪುಟಾಣಿಗಳು ನೃತ್ಯ, ಸಂಗೀತ, ನಾಟಕ, ಆಟ ಎಂದೆಲ್ಲಾ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಿ ಸಂತೋಷ ಪಟ್ಟರು.
ಕಾರ್ಯಮದಲ್ಲಿ ಶಿಕ್ಷಕರಾದ ಪಿ ಎಚ್ ಪೂಜಾರಿ, ಎಮ್ ಎನ್ ಚವ್ಹಾಣ, ಎ ಎಸ್ ಜೇವೂರ, ಎ ಎಸ್ ದುಮ್ಮಾ, ಎಸ್ ಎಸ್ ಮಾಲಾಪುರ, ಬಿ ಎಸ್ ಮಡ್ಡಿ, ಎಸ್ ಡಿ ಬಣಗಾರ ಹಾಗೂ ವಿದ್ಯಾರ್ಥಿಗಳು ಇದ್ದರು
Comments
Post a Comment