Skip to main content

Posts

Showing posts from November, 2022

ಚಡಚಣ : ಓಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ

 ಹಿರಿಯರಿಗೆ ಬಾಲ್ಯದ ದಿನಗಳನ್ನು ನೆನೆಯುವ ದಿನ. ಸ್ಫೂರ್ತಿ ನ್ಯೂಸ್ ಚಡಚಣ. ಜವಹಾರಲಾಲ್ ನೆಹರೂ ಅವರ ಜನ್ಮ ದಿನದಂದು ಆಚರಿಸುವ ಮಕ್ಕಳ ದಿನಾಚರಣೆ ಹಿರಿಯರಿಗೆ ಬಾಲ್ಯದ ದಿನಗಳನ್ನು ನೆನೆಯುವ ದಿನ, ಮಕ್ಕಳಿಗೆ ನೆಹರೂ ಅವರನ್ನು ನೆನೆಯುತ್ತಾ ಆನಂದಿಸುವ ದಿನ, ಶಿಕ್ಷರಿಗೆ ಮಕ್ಕಕನ್ನು ಆನಂದವನ್ನು ಸವಿದು ಮೆಲಕು ಹಾಕುವ ದಿನವಾಗಿದೆ ಎಂದು ಫಾರ್ಮಸಿ ಕಾಲೇಜಿನ ಉಪನ್ಯಾಸಕಿ ನೀಲಾಂಬರಿ ಖಾನಾಪುರ ಹೇಳಿದರು. ಪಟ್ಟಣದ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮುಖ್ಯ ಶಿಕ್ಷಕ ಸುರೇಶ ಜಂತಿ ಮಾತನಾಡಿ, ಪ್ರತಿ ಮಗುವು ಮುಗ್ಧತೆ, ಕ್ಷಮಾಗುಣ, ಸ್ನೇಹ, ಕಾಳಜಿ, ಕ್ರಿಯಾಶೀಲತೆ ಮತ್ತು ಅಪರಿಮಿತ ಪ್ರೀತಿಯ ಪ್ರತೀಕವಾಗಿರುತ್ತಾರೆ. ಒಂದು ಮಗು ಕನಸು ಕಂಡರೆ ಅದರಿಂದಾಗಿ ಇಡೀ ರಾಜ್ಯವು ಪ್ರಗತಿ ಕಾಣುತ್ತದೆ ಹಾಗಾಗಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳನ್ನು ಬಿತ್ತಬೇಕು, ಭವಿಷ್ಯದ ಬಗ್ಗೆ  ಕನಸುನ್ನು ಕಾಣುವಂತೆ ಪೋತ್ಸಹಿಸಬೇಕು ಎಂದರು. ಪುಟಾಣಿಗಳು ನೃತ್ಯ, ಸಂಗೀತ, ನಾಟಕ, ಆಟ ಎಂದೆಲ್ಲಾ ತಮ್ಮ ಪ್ರತಿಭೆಗಳನ್ನು ಪ್ರದರ್ಶನ ಮಾಡಿ ಸಂತೋಷ ಪಟ್ಟರು.  ಕಾರ್ಯಮದಲ್ಲಿ ಶಿಕ್ಷಕರಾದ ಪಿ ಎಚ್ ಪೂಜಾರಿ, ಎಮ್ ಎನ್ ಚವ್ಹಾಣ, ಎ ಎಸ್ ಜೇವೂರ, ಎ ಎಸ್ ದುಮ್ಮಾ, ಎಸ್ ಎಸ್ ಮಾಲಾಪುರ, ಬಿ ಎಸ್ ಮಡ್ಡಿ, ಎಸ್ ಡಿ ಬಣಗಾರ ಹಾಗೂ ವಿದ್ಯಾರ್ಥಿಗಳು ಇದ್ದರು

ವೈಜ್ಞಾನಿಕ ಮನೋಭಾವ ಹೆಚ್ಚಿಸುವಲ್ಲಿ ಕೆ ಜೆ ವ್ಹಿ ಎಸ್ ಪಾತ್ರ ಮಹತ್ವದ್ದು : ಚನಗೊಂಡ

  ಸ್ಫೂರ್ತಿ ನ್ಯೂಸ್ ಚಡಚಣ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಅನೌಪಚಾರಿಕವಾಗಿ ಹೆಚ್ಚಿಸುವಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪಾತ್ರ ಮಹತ್ವದ್ದು ಎಂದು ಶಿಕ್ಷಣ ಸಂಯೋಜಕರ ಶ್ರೀಶೈಲ ಚನಗೊಂಡ ಹೇಳಿದರು. ಝಳಕಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರೌಢ ಶಾಲೆಯಲ್ಲಿ ನಡೆದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿಜಯಪುರ ಅವರ ಆಶ್ರಯದಲ್ಲಿ   ನಡೆದ ಜಿಲ್ಲಾ ಮಟ್ಟದ  ಸ್ವಾತಂತ್ರ್ಯ ಅಮೃತ ಮಹೋತ್ಸವ ರಸಪ್ರಶ್ನೆ ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷರಾದ ಜಿ ಎಸ್ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಕೆ ಜೆ ವ್ಹಿ ಎಸ್ ನಡೆದು ಬಂದ ದಾರಿ ಕುರಿತು ಹೇಳಿದರು. ಸರಕಾರಿ ಪ್ರೌಢ ಶಾಲೆ ಝಳಕಿ ಮುಖ್ಯ ಶಿಕ್ಷಕ ಶಿವಾಜಿ ನಾಗಣಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಹೆಚ್ಚು ಹೆಚ್ಚು ಸಂಘಟನೆ ಮಾಡಿ ವಿಜ್ಞಾನವನ್ನು ಸರಳವಾಗಿ ಕಲಿಯಲು ಅನುಕೂಲವಾಗಲಿದೆ ಎಂದರು. ಜಿಲ್ಲಾ ಸಮನ್ವಯಾಧಿಕಾರಿ ಶ್ರೀದೇವಿ ಪಾಟೀಲ ಜಿಲ್ಲಾ ಮಟ್ಟದ ಆನ್ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡ ಬಗ್ಗೆ ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ರಮೇಶ ನಾಯಕ ಅವರುಪ್ರಥಮ. ಶೌರ್ಯ ರಾಜೇಶ್ ಕಟ್ಟಿ.ಸೇಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿಜಯಪುರ.ದ್ವಿತೀಯ. ನವೀನ ಅವರಾದ.ಬ್ರಿಲಿಯಂಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ತಾಳಿಕೋಟಿ.ತೃತೀಯ. ಸಮರ್ಥ ರವಿಚಂದ್ರ ಬನಸೋಡೆ.ಶ್ರೀ ಸಂಗಮೇಶ್ವರ...

ಕನಕದಾಸರ ತತ್ವದರ್ಶ ಅಳವಡಿಸಿಕೊಳ್ಳಿ : ಚನಗೊಂಡ

  ಸ್ಫೂರ್ತಿ ನ್ಯೂಸ್ ಚಡಚಣ. ನಮ್ಮಲ್ಲಿರುವ ನಾನು ಎಂಬ ಅಹಂ ನಮ್ಮನು ಬಿಟ್ಟು ಹೋಗುತ್ತೋ ಅವತ್ತು ನಾವು ಮೋಕ್ಷಕ್ಕೆ ಅರ್ಹರು ಎಂಬ ಕನಕದಾಸರ ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ಶ್ರೀಶೈಲ್ ಚನಗೊಂಡ ಹೇಳಿದರು. ಪಟ್ಟಣದ ಬಿಇಒ ಹಾಗೂ ಬಿ ಆರ್ ಸಿ ಕಚೇರಿಯಲ್ಲಿ ದಾಸ ಶ್ರೇಷ್ಠ, ಶ್ರೇಷ್ಠ ಸಂತ ಶ್ರೀ ಕನಕದಾಸರ 535 ನೇ ಜಯಂತೋತ್ಸವದಲ್ಲಿ ಅವರು ಮಾತನಾಡಿದರು. ಶಿಕ್ಷಣ ಸಂಯೋಜಕ ಎಮ್ ಎಲ್ ಪಾಂಡ್ರೆ ಮಾತನಾಡಿ,  ಸಮಾಜದಲ್ಲಿ ಸಾಮರಸ್ಯ ಇರಬೇಕೆಂದರೆ ಕನಕದಾಸರ ಕುಲ ಕುಲ ಕುಲವೆಂದು ಏಕೆ ಬಡೆದಾಡುವಿರಿ ಕುಲದ ನೇಲೆ ಬಲ್ಲಿರಾ ಎಂಬ ತತ್ವವನ್ನು ಅರಿತರೆ ಇಡೀ ಜಗತ್ತೇ ಸುಂದರಮಯವಾಗುತ್ತದೆ ಎಂದು ಹೇಳಿದರು .  ಸಿ ಆರ್ ಪಿ ಗಳಾದ ಸದಾಶಿವ ಆಲಗೂರ, ಶಶಿಧರ ಹೊನ್ನಳ್ಳಿ,  ಅವರು  ಕನಕದಾಸರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆ ಪತ್ರಾಂಕಿತ ವ್ಯವಸ್ಥಾಪಕ  ಅಶೋಕ ಉಮರಾಣಿ  ವಹಿಸಿದ್ದರು. ರಾಜೇಶ ವಾಲಿಕಾರ ಹಾಗೂ ಶರಣು ಜಿರಂಕಲಿ, ಪ್ರಭುಲಿಂಗ ಗುಮತೆ ಅವರು ಕನಕದಾಸರ ಫೋಟೊ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಸ್ ಎಸ್ ಸೂರಜ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶರಣು ಜಿರಂಕಲಿ, ಶಶಿಧರ ಹೊನ್ನಳ್ಳಿ , ಸತೀಶ ಬಗಲಿ ಹಾಗೂ ಸಿ ಆರ್ ಪಿ ಗಳು, ಅವಳಿ ಕಾರ್ಯಾಲಯದ ಎಲ್ಲ ಸಿಬ್ಬಂದಿಯವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕ್ಷೇತ್ರ ಸಂಪನ್ಮೂಲ ವ್ಯಕಕ್ತಿ ...

ಆಸ್ಟ್ರೇಲಿಯಾ ಟೆನಿಸ್ ಪಂದ್ಯಾವಳಿಗೆ ಗುರುರಾಜ ಕಲ್ಯಾಣಶೆಟ್ಟಿ

ಸ್ಫೂರ್ತಿ ನ್ಯೂಸ್ ಚಡಚಣ. ಅಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡಿನ ಗೋಲ್ಡ್ಕೋಸ್ಟ್ನಲ್ಲಿನ.4ರಿಂದ 13ರ ವರೆಗೆ ನಡೆದಿರುವ 12 ನೇ ಪಾನ್ ಫೆಸಿಪಿಕ್ ಮಾಸ್ಟರ್ಸ ಗೇಮ್ ಟೆನಿಸ್ ಪಂದ್ಯಾವಳಿಯಲ್ಲಿ ಚಡಚಣ ತಾಲೂಕಿನ ಲೋಣಿ (ಬಿ.ಕೆ) ಗ್ರಾಮದ ಗುರುರಾಜ ಶಂಕರ ಕಲ್ಯಾಣಶೆಟ್ಟಿ ಪಾಲ್ಗೊಂಡಿದ್ದಾರೆ. ಪಾನ್ ಫೆಸಿಪಿಕ್ ಮಾಸ್ಟರ್ಸ್ ಗೇಮ್ ಹಿರಿಯ ಕ್ರೀಡಾಪಟುಗಳಿಗಾಗಿ ಎರಡು ವರ್ಷಕ್ಕೊಮ್ಮೆ 40 ಕ್ರೀಡೆಗಳಲ್ಲಿ ಸ್ಪದರ್ೆ ಏರ್ಪಡಿಸುತ್ತಿದ್ದು, ಟೆನಿಸ್ ಪಂದ್ಯಾವಳಿಗೆ ಆಯ್ಕೆಯಾದ ಗ್ರಾಮೀಣ ಪ್ರದೇಶದ ಗುರುರಾಜ ಪಾಲ್ಗೊಂಡಿದ್ದು ಗ್ರಾಮಸ್ಥರಿಗೆ ಹರ್ಷ ತಂದಿದೆ ಎಂದು ಶಶಿಧರ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಯುವಕರು ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಿ : ಶಾಸಕ ದೇವಾನಂದ

  ಸ್ಫೂರ್ತಿ ನ್ಯೂಸ್ ವಿಜಯಪುರ . ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುದರಿಂದ ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆ ಯುವಜನರ ಚೇತನವಾಗಬೇಕು ಎಂದು ಶಾಸಕ ದೇವಾನಂದ ಚವ್ಹಾಣ ಹೇಳಿದರು. ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಟೈಕ್ವಾಂಡೋ ಸ್ಪರ್ದೇ ಉದ್ಘಾಟಿಸಿ ಅವರು ಮಾತನಾಡಿದರು. ಮೊಬೈಲ್ ಬಾಳಿಕೆಯನ್ನು ಇಂದಿನ ಯುವ ಜನಾಂಗ ಕಡಿಮೆ ಮಾಡಿಕೊಂಡು ಕ್ರೀಡಾ ಮನೋಭಾವನೆ ಬೆಳಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸ್ಪರ್ಧೆಯಲ್ಲಿ ಭಾಗವಹಿಸಲು ವಿವಿಧ ಕಾಲೇಜುಗಳಿಂದ ಆಗಮಿಸಿದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.